Breaking News

How To Make Pineapple pastry at home

96 total views, 6 views today

Pineapplepastry

Image may contain: dessert and food
ಪೈನಾಪಲ್ ಪೇಸ್ಟ್ರಿ

ಬೇಕಾಗುವ ಪದಾರ್ಥಗಳು :

ಮೈದಾ 1 1/4 ಕಪ್
ಸಕ್ಕರೆ 1ಕಪ್
ಬೇಕಿಂಗ್ ಪೌಡರ್ 1/2 sp
ಸೋಡಾ ಪುಡಿ 1/2 sp
ಇವೆಲ್ಲ ಸೇರಿಸಿ ಜರಡಿ ಹಿಡಿದು ಕೊಳ್ಳಿ

ಇನ್ನೊಂದು ಪಾತ್ರೆಯಲ್ಲಿ
ಮೊಸರು 60 ml
ರೀಪೈಂಡ್ ಎಣ್ಣೆ 60ml
ನೀರು 80 ml
ಹಾಲು 2 sp
ಪೈನಾಪಲ್ ಎಸ್ಸನ್ಸ್ 1sp OR ವೆನಿಲಾ ಎಸ್ಸನ್ಸ್
ಎಲ್ಲಾ ಸೇರಿಸಿ ಚೆನ್ನಾಗಿ ಬ್ಲೆಂಡರ್ ನಿಂದ ಸೇರಿಸಿ. ನಂತರ ಮೇಲೆ ಹೇಳಿದ ಡ್ರೈ ಪುಡಿಯನ್ನು 2 ಬ್ಯಾಚ್ ನಲ್ಲಿ ಸೇರಿಸಿ ಕೇಕ್ ಮೌಲ್ಡ್ ಗೆ ಹಾಕಿ. 180 ಡಿಗ್ರಿ ಪ್ರೀಹೀಟ್ ಓವೆನ್ ನಲ್ಲಿ 25 ನಿಮಿಷ ಬೇಯಿಸಿ. ನಂತರ 1ಟೂತ್ ಪೀಕ್ ನಿಂದ ಕೇಕ್ ಮಧ್ಯೆ ಚುಚ್ಚಿ ತೆಗೆದು ನೋಡಿ.ಅದಕ್ಕೆ ಹಿಟ್ಟು ಮೆತ್ತಿ ಕೂಳ್ಳ ದಿದ್ದರೆ ಅದು ಬೆಂದಿರುತ್ತದೆ. ಹಿಟ್ಟು ಮೆತ್ತಿದರೆ ಮತ್ತೆ 2-3ನಿಮಿಷ ಬೇಯಿಸಿ.

Image may contain: dessert, food and indoor

1 ಪೈನಾಪಲ್ ನ್ನು ಸಣ್ಣಗೆ ಹೆಚ್ಚಿ .ಇನ್ನೊಂದು 1 ಕಪ್ ಜ್ಯೂಸ್ ಮಾಡಿ ಸಕ್ಕರೆ ಸೇರಿಸಿ.

ಕೇಕ್ ಮದ್ಯ ಕತ್ತರಿಸಿ ಮೇಲೆ ಹೇಳಿದ
ಜ್ಯೂಸ್ ನ್ನು ಬ್ರಷ್ ನಿಂದ ಸವರಿ ಕ್ರೀಂ ಹಚ್ಚಿ. ಪೈನಾಪಲ್ ತುಂಡು ಹಾಕಿ ಅದರ ಮೇಲೆ ಕತ್ತರಿಸಿದ ಇನ್ನೊಂದು ಕೇಕ್ ಇಟ್ಟು ಅದಕ್ಕೂ ಜ್ಯೂಸ್ ಹಚ್ಚಿ ಕ್ರೀಂ ಹಚ್ಚಿ ಪೈನಾಪಲ್ ಮತ್ತು ಚೆರ್ರಿ ಯಿಂದ ಅಲಂಕರಿಸಿ.

ಕ್ರೀಂ ತಯಾರಿಸಲು: ಅಮೂಲ್ ಕ್ರೀಂ ನ್ನು 1ಬಟ್ಟಲಿಗೆ ಹಾಕಿ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ . ಇನ್ನೊಂದು ಪಾತ್ರೆಯಲ್ಲಿ ಐಸ್ ಕ್ಯೂಬ್ಸ್ ಹಾಕಿ ಅದನ್ನು ಇದರ ಮೇಲೆ ಇಟ್ಟು ಚೆನ್ನಾಗಿ ಬ್ಲೆಂಡ್ ಮಾಡಿ. ಬೆಣ್ಣೆ ಯಾಗದಂತೆ ಎಚ್ಚರ ವಹಿಸಿ.

 

Leave a Reply

Your email address will not be published.

Share
Share