Breaking News

ಗರಿ ಗರಿ ನಿಪ್ಪಟ್ಟು ಮಾಡುವ ವಿಧಾನ ಅಡುಗೆ ಅರಮನೆ ಶುದ್ದ ಸಸ್ಯಾಹಾರಿ

291 total views, 3 views today

ಗರಿ ಗರಿ ನಿಪ್ಪಟ್ಟು

ಬೇಕಾಗುವ ಸಾಮಗ್ರಿಗಳು :

ಅಕ್ಕಿ ಹಿಟ್ಟು- 1ಕಪ್
ಮೈದಾ ಹಿಟ್ಟು- ಅರ್ಧ ಕಪ್
ಹುರಿಗಡಲೆ ಹಿಟ್ಟು 2 -ಟೀ ಚಮಚ
ಕಡಲೆ ಹಿಟ್ಟು- 2 ಟೀ ಚಮಚ
ಚಿರೋಟಿ ರವೆ- ಅರ್ಧ ಕಪ್
ಕಡಲೆ ಬೀಜ 100 ಗ್ರಾಂ
ಹುರಿಗಡಲೆ(ಪುಟಾಣಿ) 100 ಗ್ರಾಂ
ಎಳ್ಳು-3ಟೀಚಮಚ
ಉಪ್ಪು
ಅಚ್ಚಖಾರದ ಪುಡಿ

ಮಾಡುವ ವಿಧಾನ:-

ಗರಿ ಗರಿ ನಿಪ್ಪಟ್ಟು
ಗರಿ ಗರಿ ನಿಪ್ಪಟ್ಟು

ಅಕ್ಕಿಹಿಟ್ಟು, ಕಡಲೆಹಿಟ್ಟು& ಹುರಿಗಡಲೆ ಹಿಟ್ಟನ್ನು ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಿ, ರವೆಯನ್ನು ಹುರಿದುಕೊಂಡು, ಇದಕ್ಕೆ ಮೈದಾ, ಉಪ್ಪು, ಖಾರದಪುಡಿ ಬೆರೆಸಿ 3-4 ಚಮಚ ಎಣ್ಣೆ ಬಿಸಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ಕಡಲೆಬೀಜ(ದಪ್ಪದಪ್
ಪನಾಗಿ ಪುಡಿಮಾಡಿ,), ಹುರಿಗಡಲೆ,ಎಳ್ಳು ಬೆರೆಸಿ ನೀರು ಹಾಕಿ ಕಲಸಿರಿ, ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಗೆ ಕಲಸಿ ಚೆನ್ನಾಗಿ ನಾದಿ, 5 ನಿಮಿಷ ಮುಚ್ಚಿಡಿ. ನಂತರ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ ಬಾಳೆಎಲೆ ಅಥವಾ ದಪ್ಪ ಪ್ಲಾಸ್ಟಿಕ್ ಪೇಪರ್ ಮೇಲೆ ಎಣ್ಣೆಸವರಿ ಕೈಯಿಂದ(ಚಪಾತಿಗಿಂತ ದಪ್ಪಗೆ) ತಟ್ಟಿ . ಮಿಡೀಯಂ ಉರಿಯಲ್ಲಿ ಎಣ್ಣೆಯಲ್ಲಿ ಕರೆಯಿರಿ, ಗರಿಗರಿ ನಿಪ್ಪಟ್ಟು ಕಾಫಿ ಅಥವಾ ಟೀ ಜೊತೆಗೆ ರೆಡಿ.

One thought on “ಗರಿ ಗರಿ ನಿಪ್ಪಟ್ಟು ಮಾಡುವ ವಿಧಾನ ಅಡುಗೆ ಅರಮನೆ ಶುದ್ದ ಸಸ್ಯಾಹಾರಿ”

Leave a Reply

Your email address will not be published.

Share
Share